ಎಚ್.ಪಿ.ಆರ್ ಎಂಟರ್ಟೈನ್ಮೆಂಟ್ ಪ್ರೈ ಲಿ ಲಾಂಛನದಲ್ಲಿ ಎ.ಹರಿಪ್ರಸಾದ್ರಾವ್ ಅವರು ನಿರ್ಮಿಸಿರುವ ‘ಜಂಬೂಸವಾರಿ‘ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ಜೂನ್ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ವೇಣುಗೋಪಾಲ್.ಕೆ.ಸಿ ನಿರ್ದೇಶನದ ಈ ಚಿತ್ರಕ್ಕೆ ಬೆಂಗಳೂರಿನಲ್ಲೇ ಹೆಚಿನ ಭಾಗದ ಚಿತ್ರೀಕರಣವಾಗಿದೆ. ಎಸ್.ಪ್ರೇಮಕುಮಾರ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಪ್ರತಾಪ್ ಅವರ ಛಾಯಾಗ್ರಹಣವಿದೆ. ರಮೇಶ್ಬಾಬು ಸಂಕಲನ, ಹರಿಕೃಷ್ಣ ನೃತ್ಯ ನಿರ್ದೇಶನ ಹಾಗೂ ಬಾಬುಖಾನ್ ಕಲಾನಿರ್ದೇಶನವಿರುವ ಈ ಚಿತ್ರಕ್ಕೆ ಚಂದ್ರು.ಎಸ್.ಎಲ್ ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದಾರೆ. ಪ್ರಜ್ವಲ್, ನಿಕ್ಕಿ, ಶೊಭ್ರಾಜ್, ಅಚ್ಯುತರಾವ್, ಚೈತ್ರಾರೈ, ಮಿತ್ರ, ಸಾನಿಯಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.